ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ
 CSIR-CFTRI ಕುರಿತು
 ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು
 ಮಾನವ ಸಂಪನ್ಮೂಲ ಅಭಿವೃದ್ಧಿ
 ಸೇವಾ ಸೌಲಭ್ಯಗಳು 
 ಸಂಪರ್ಕಿಸಿ
ANNUAL REPORT
Home
ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು

 

ಫ್ರಕ್ಟೊ ಆಲಿಗೊಸಾಖರೈಡ್ಸ (FOS)

ಫ್ರಕ್ಟೊ ಆಲಿಗೊಸಾಖರೈಡ್ಸ (FOS) ಗಳು ಅನೇಕ ಅಹಾರದ ಗುಣಮಟ್ಟವನ್ನು ಹೆಚ್ಚಿಸುವಂತಹ ಅತ್ಯುತ್ತಮವಾದ ಶಕ್ತಿಯುಳ್ಳ ಒಂದು ಅಜೀರ್ಣಸಾಧ್ಯ  ಆಹಾರ ಪದಾರ್ಥ ಜೊತೆಗೆ ಉಪಯುಕ್ತಕರ ಶಾರೀರಿಕ ಪರಿಣಾಮಕಾರಿ. ಈ ಆಲಿಗೊಸಾಖರೈಡ್ಸಗಳು ಎಫ್ಟಿಏಸ್ (FTase) ಎಂಬ ಕಿಣ್ವದ ಕ್ರಿಯೆಗೆ (trasfructosylation)  ಒಳಗಾದ ಸಕ್ಕರೆ(sucrose) ಯಿಂದ ಆದ ಒಂದು ಉತ್ಪನ್ನ. ಈ ಪ್ರಕ್ರಿಯೆಯ ಮೂಲಕ 50 ಕಿಲೋಗ್ರಾಂ ಬಳಸಿ ಉತ್ಪನ್ನಗೊಂಡ ಎಫ್ಓಎಸ್(FOS) ಪ್ರತಿಶತ 52-54 ಹೊಂದಿದ್ದು ಮಾರುಕಟ್ಟೆಯಲ್ಲಿ ಸಿಗುವ ಮಾದರಿಯಂತಿದೆ. ಇಂತಹ FTase ಉತ್ಪಾದನೆಯಲ್ಲಿ ಬಳಸಿರುವ ಆಸ್ಪರ್ಜಿಲಸ್ ಒರೈಸೆ ಎಂಬ ಶಿಲೀಂಧ್ರವು (Fungus) ಬಹುಮಟ್ಟಗೆ ಸುರಕ್ಷಿತ ಮಾನ್ಯತೆ ಪಡೆದಿದ್ದು, Generally Recognized as safe (GRAS), ಇದು ನಿಯಂತ್ರಣ ಕೋನದಿಂದ ಮಖ್ಯವಾದ ಅಂಶವಾಗಿದೆ.  ಈ ಪ್ರಕ್ರಿಯೆ ಈಗಾಗಲೇ ವಾಣಿಜ್ಯೀಕರಣಗೊಂಡಿದೆ.

ಪರಿಶುದ್ಧ ಕೊಬ್ಬರಿ ಎಣ್ಣೆ

ತಾಜಾ ತೆಂಗಿನ ಕಾಯಿಯ ತಿರುಳು / ಅಡಬಳ ಬಳಸಿ ಯಾವುದೇ ಉಷ್ಣದ ವಿಧಾನವನ್ನು ಅಳವಡಿಸದೆ, ಹಿಂಡಿದ ಪರಿಶುದ್ಧ ಕೊಬ್ಬರಿ ಎಣ್ಣೆಯು ವರ್ಣರಹಿತ  ಹಾಗೂ ತೀವ್ರ ಸುವಾಸನೆಯನ್ನು ಹೊಂದಿರುತ್ತದೆ.  ಈ ಉತ್ಪನ್ನವು ಲಾರಿಕ್ ಆಸಿಡ್ (lauric acid) ಎಂಬ ಕೊಬ್ಬಿನಾಮ್ಲವನ್ನು ಹೆಚ್ಚಿನ ಅಂಶದಲ್ಲಿ ಹೊಂದಿದ್ದು ಇ-ಜೀವಸತ್ವದಿಂದ (Vitamin -E) ಕೂಡಿದ್ದು ಜೌಷದೀಯ/ಸೌಂದರ್ಯವರ್ಧಕವಾಗಿ ಬಳಕೆಯಾಗುತ್ತದೆ. ಈ ಉತ್ಪನ್ನದಲ್ಲಿ ಪರ್ ಆಕ್ಸಿಡೇಸ್ (peroxidase) ಎಂಬ ಕಿಣ್ವದ ಅಂಶವು 1 ಕ್ಕಿಂತ ಕಡಿಮೆ ಮತ್ತು ಬಿಡಿಸಿದ ಕೊಬ್ಬಿನಾಮ್ಲಗಳು (FFA) ಪ್ರತಿಶತ 0.2 ಗಿಂತ ಕಡಿಮೆ ಇರುತ್ತದೆ. ಈ ಉತ್ಪನ್ನವನ್ನು ಬೆಣ್ಣೆ, ತುಪ್ಪ ಹಾಗೂ ಅಡುಗೆ ಎಣ್ಣೆಯ ಬದಲಿಗೆ  ಉಪಯುಕ್ತವಾದುದೆಂದು ಪರಿಗಣಿಸಲಾಗಿದೆ. ಈ ತಂತ್ರಜ್ಞಾನವು ಈಗಾಗಲೇ ವಾಣಿಜ್ಯೀಕರಣಗೊಂಡಿದೆ.

ಪಾಚಿಯಿಂದ ಜೈವಿಕ ಸಮೂಹ

ಪಾಚಿ ಮೂಲದ ಜೈವಿಕ ಸಮೂಹವು ಆಹಾರ ಮತ್ತು ಅಹಾರೇತರ ಪದಾರ್ಥಗಳಲ್ಲಿ ಬಳಕೆಯಲ್ಲಿದೆ ಎಂದು ತಿಳಿದುಬಂದಿದೆ. ಅದರ ಹೊರಾಂಗಣ ಕೃಷಿಯು ವರ್ಧಿತ ಲಕ್ಷಣಗಳೊಂದಿಗೆ ಪ್ರಯೋಗಾಲಯದಲ್ಲಿ ಪ್ರಮಾಣೀಕೃತಗೊಂಡಿದೆ. ಇವುಗಳಲ್ಲಿ ಸ್ಪಿರುಲಿನ (sprulina) ಎಂಬ ಪಾಚಿಯು ಕಬ್ಬಿಣದ ಅಂಶದಿಂದ ಪುಪ್ಟೀಕೃತಗೊಂಡು ಜೈವಿಕ ಲಭ್ಯತೆಯನ್ನು ಹೊಂದಿರುತ್ತದೆ.  ದುನಲೀಲ್ಲ (Dunaliella) – ಬೀಟಕ್ಯಾರೋಟಿನ್ (Beta Carotene),  ಹಿಮಟೋಕಾಕಸ್ ಪ್ಲುವಿಯಲಿಸ್ (Haematococcus pluvialis) – ಅಸ್ಟಸ್ಯಾಂತಿನ್ (Astaxanthin) ಮತ್ತು ಬೋಟ್ರಿಯೊಕಾಕಸ್ ಬ್ರೌನಿ – ಹೈಡ್ರೊಕಾರ್ಬನಿನ (Hydrocarbon) ಮೂಲ. ಕೆಲವೊಂದು ಉತ್ಪನ್ನಗಳನ್ನು ಕಾರ್ಖಾನೆಗಳಿಗೆ ವರ್ಗಿಕರಿಸಲಾಗಿದೆ.

ಜೈವಿಕ – ಬೇರ್ಪಡಿಕೆ ಹಾಗೂ ಪ್ರವಾಹದ ಸಂಸ್ಕರಣೆ

ಜೈವಿಕ ತಂತ್ರಜ್ಞಾನ ಹಾಗೂ ಜೀವರಸಾಯನದಡಿಯಲ್ಲಿ ಜೈವಿಕ- ಬೇರ್ಪಡಿಕೆ ಹಾಗೂ ಪ್ರವಾಹದ ಸಂಸ್ಕರಣೆ ಒಂದು ಮುಖ್ಯ ಸ್ಥಾನವನ್ನಾಗಿಸಿಕೊಂಡಿದೆ. ಜಲೀಯ ಎರಡು ಹಂತದ ನಕಲೀಕರಣವು, Aqueous two phase extraction (ATPE) ಹಲವು ಮೂಲಗಳ ಪ್ರೋಟಿನ ನಕಲೀಕರಣ ಹಾಗೂ ಶುಧ್ಧೀಕರಣದಲ್ಲಿ ಬಹುದೊಡ್ಡ ಕಾರ್ಯ ನಿರ್ವಹಿಸುತ್ತಿದೆ. ಆರೋಗ್ಯದ ಪ್ರಯೋಜನಕಾರಿ ಗುಣಗಳನ್ನು ಹೊಂದಿದ ನೈಸರ್ಗಿಕ ಆಹಾರ ವರ್ಣಗಳಾದ ಫೈಕೊಬಿಲಿ ಪ್ರೋಟಿನ (Phycobiliprotein),  ಅಂತೋಸೈಯನಿನ್ (Anthocyanin) ಮತ್ತು   ಸಿ-ಫೈಕೋಸೈಯನಿನ್ (C-phycocyanin) ಗಳನ್ನು ATPE ಸಂಸ್ಕರಣಾ ಆಧಾರದ ಮೇಲೆ ಪ್ರಯೋಗಾಲಯದಲ್ಲಿ ಬೇರ್ಪಡಿಸಿ ಸಾಧಿಸಲಾಗಿದೆ. ಇಂತಹ ಸಂಸ್ಕರಣೆಗಳು ವಾಣಿಜ್ಯೀಕರಣಕ್ಕೆ ಸಿದ್ಧವಾಗಿದೆ.

ಆರೋಗ್ಯ ಪೋಷಣ ಪುಷ್ಟೀಕರಿಸಿದ ಎಣ್ಣೆ

ಪೋಷಣ ಪುಷ್ಟೀಕರಿಸಿದ ಎಣ್ಣೆಯನ್ನು ಪಡೆಯುವ ಸಲುವಾಗಿ, ಒರೈಸನಾಲ್ (oryzanol) ಬೀಟ ಕ್ಯಾರೋಟಿನ್ (beta-carotene), ಟೊಕೊಫೆರಾಲ್ (tocopherol) ಟೊಕೋಟ್ರೈಯಿನಾಲ್ಸ್ (tocotrienols) ಮತ್ತು ಲಿಗ್ನಾನ್ನಟ್ಸ್ (lignants) ಹೊಂದಿದ ಮಿಶ್ರಿತ ಎಣ್ಣೆಗಳನ್ನು ವೇಗವರ್ಧಿತ ಲೈಪೇಸ್ (lipase) ಎಂಬ ಕಿಣ್ವದ ಮೂಲಕ   ಇಂಟರ್-ಎಸ್ಟರಿಷಿಕೇಶನ್  (interesterification) ಪ್ರಕ್ರಿಯೆಯಿಂದ ಮಂಥಿಸಿದ ಮಿಶ್ರಿತ ಎಣ್ಣೆಯನ್ನು ತಯಾರು ಮಾಡಲಾಗಿದೆ ಹಾಗೂ ಈ ರೀತಿಯಲ್ಲಿ ಕಿಣ್ವಕ ವಿಧಾನವನ್ನು ಸಾಂಬಾರು ಪದಾರ್ಥಗಳಿಂದ ಬಯೊಓಲಿಯೊರೆಸಿನ್ಸ್ (Biooleoresins) ಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿದೆ.

ಆಹಾರ ಭದ್ರತೆ

ಜನಸಾಮಾನ್ಯರ ಸುಧಾರಿತ ಆಹಾರ ಸಂರಕ್ಷಣೆಯನ್ನು ಖಾತರಿಪಡಿಸಲು ಹಲವು ವಿಶ್ಲೇಷಣಾತ್ಮಕ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಡಿಎನ್ಎ (DNA) ಆಧಾರಿತ ಕಾರ್ಯವಿಧಾನಗಳಿಂದ ಪ್ರಕ್ರಿಯೆಗೊಂಡ ಆಹಾರ ಕಶ್ಮಲೀಕರಣವನ್ನು ಕಂಡುಹಿಡಿಯವುದು, ಚ್ವೆವಿಕ ಸಂವೇದಕ (biosensor) ಆಧಾರಿತ ಕ್ರಿಮಿನಾಶಕ ಔಷದಗಳ ಉಳಿವಿಕೆಗಳನ್ನು ಹಾಗು ಹಲವು ಪಿಸಿಆರ್ (PCR) ಆಧಾರಿತ ವಿಧಾನಗಳಿಂದ ಆಹಾರದಿಂದ ಸಾಗಿಸಲ್ಪಟ್ಟ ರೋಗಕಾರಕಗಳನ್ನು ಕಂಡುಹಿಡಿಯುವ  ವಿಶ್ಲೇಷಣಾತ್ಮಕ ವಿಧಾನಗಳನ್ನು ಅಳವಡಿಸಕೊಳ್ಳಲಾಗಿದೆ.

ಬಾಟಲೀಕರಣಗೊಂಡ ಕಬ್ಬಿನ ರಸ

ಭಾರತವು ಮೆದು ಪಾನೀಯ ಹಾಗು ಫಲಾಧಾರಿತ ಪಾನೀಯಗಳ ಸಂಭವನೀಯ ಮಾರುಕಟ್ಟೆ ಎನ್ನಿಸಿಕೊಳುತ್ತದೆ. ಭಾರತವು ಕಬ್ಬಿನ ಬೆಳೆಯಲ್ಲಿ ಬ್ರಜಿಲ್ ನಂತರದ ಎರಡನೆ ಸ್ಥಾನದಲ್ಲಿದೆ. ದೇಶದಲ್ಲಿ ಬೆಳೆಯುವ ಕಬ್ಬುಗಳೆಲ್ಲವು ಸಕ್ಕರೆ ಕಾರ್ಖಾನೆಗಳಿಗೆ ರವಾನೆಯಾಗುವುದಿಲ್ಲ, ಬದಲಾಗಿ ಮೂರನೆ ಒಂದು ಭಾಗ ಗುರ್ ಮತ್ತು ಖಂದ್ಸಾರಿ ಉತ್ಪಾದನೆಗೆಂದು ಬಿಡಲಾಗುತ್ತಿದೆ. ಆದರು ಇಂತಹ ಉತ್ಪಾದನಗಳು ಉತ್ತಮ ಮಾರುಕಟ್ಟೆಯಲ್ಲಿಲ್ಲ. ಇದರಿಂದ ಕಬ್ಬಿನ ಉಪಯೋಗದ ಬೇರೆ ರೀತಿ ಹಾಗು ವಿಧಾನಗಳನ್ನು ಕಂಡುಹಿಡಿಯುವ ಅವಶ್ಯಕತೆ ಇರುತ್ತದೆ. ಈ ಸಂದರ್ಭದಲ್ಲಿ ಕಬ್ಬಿನ ರಸದ ಸಂರಕ್ಷಣಗೆಂದು ಬಾಟಲಿ ಪಾನೀಯದ ಒಂದು ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಪಾನೀಯವು ನೈಸರ್ಗಿಕವಾಗಿದ್ದು, ಔಷದೀಯ ಮತ್ತು ರೋಗ ಪರಿಹಾರಕ ಗುಣಗಳನ್ನು ಹೋಂದಿದ್ದು ಶಕ್ತಿಯುತ ಹಾಗು ಪೌಪ್ಠೀಕೃತವಾಗಿರುತ್ತದೆ.

ಹಣ್ಣಿನ ದ್ರವಗಳು (ಸ್ಪಷ್ಟಪಡಿಸಿದ ಹಣ್ಣಿನ ರಸ) - ಸೀಬೆ, ಬಾಳೆ, ದ್ರಾಕ್ಷಿ, ಸೇಬು

ಹಣ್ಣಿನ ದ್ರವಗಳು ನೈಸರ್ಗಿಕವಾಗಿದ್ದು ಕೃತಕ ಹಣ್ಣಿನರಸಕಿಂತ ಬದಲಾಗಿರುತ್ತದೆ ಹಾಗು ಸರಿಯಾದ ಸಾರಗುಂದಿಸುವಿಕೆ ಮತ್ತು ಕಾರ್ಬೊನೇಷನ್ ಬಳಸಿ ಪರಿಣಾಮಕಾರಿಯಾದ ಮೆದು ಪಾನೀಯವಾಗಿ ಬಳಸಬಹುದು. ಹಣ್ಣುಗಳನ್ನು RTS ಪಾನೀಯವಾಗಿ ಹಾಗು ಕ್ರೂಡಿಕರಿಸುವ ಸಲುವಾಗಿ, ಬಾಳೆ, ಸೀಬೆ, ದ್ರಾಕ್ಷಿ, ಸೇಬು ಹಣ್ಣುಗಳ ರಸವನ್ನು ಸ್ಪಷ್ಟಪಡಿಸಿದ ಉತ್ಪನ್ನದ ಪ್ರಕ್ರಿಯೆಯನ್ನು ಕಿಣ್ವಕ   ಹೈಡ್ರಾಲಿಸಿಸ್  ಮೂಲಕ ಪ್ರಮಾಣಿಕೃತಗೊಳಿಸಲಾಗಿದೆ.